Candidate must submit only one application for each post. If the candidate submits more than one application for the same post, such application will be rejected.
ಅಭ್ಯರ್ಥಿಯು ಒಂದು ಹುದ್ದೆಗೆ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸತಕ್ಕದು. ಒಂದಕ್ಕಿಂತ ಹೆಚ್ಚು ಅರ್ಜಿಯನ್ನು ಸಲ್ಲಿಸಿದಲ್ಲಿ ಆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಅಭ್ಯರ್ಥಿಗಳು ONLINE ಮೂಲಕ ಅರ್ಜಿ ಭರ್ತಿ ಮಾಡುವ ಮೊದಲು ಸೂಚನೆಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳತಕ್ಕದು.


ಹಂತ 1:- ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‍ಸೈಟ್ http://www.bccbl.co.in/ ಅಥವಾ http://www.recruit-app.com/tbccb-2014/ ಅನ್ನು ತೆರೆದ ಕೂಡಲೇ ಕಂಪ್ಯೂಟರ್ ಪರದೆಯ ಮೇಲೆ ‘TBCCBANK RECRUITMENT 2014’ ಎಂದು ಮೂಡುತ್ತದೆ ಮತ್ತು ಅಧಿಸೂಚನೆ, ಶುಲ್ಕ ವಿವರಗಳು ಲಭ್ಯವಾಗಲಿದ್ದು, ಅಭ್ಯರ್ಥಿಗಳು ಅಧಿಸೂಚನೆಯಲ್ಲಿನ ವಿವರಗಳನ್ನು ಮತ್ತು ಅರ್ಜಿ ಸಲ್ಲಿಸುವ ಸೂಚನೆಗಳನ್ನು ತಪ್ಪದೇ ಓದಿಕೊಂಡು ಅದರಂತೆ ಅರ್ಜಿಯನ್ನು ಭರ್ತಿ ಮಾಡತಕ್ಕದ್ದು.
ಹಂತ 2:- ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅಭ್ಯರ್ಥಿಯು ತನ್ನ ಇತ್ತೀಚಿನ ಭಾವಚಿತ್ರವನ್ನು ಒಂದು ಸ್ವಚ್ಛವಾದ ಬಿಳಿ ಹಾಳೆಯ ಮೇಲೆ ಲಗತ್ತಿಸಿ ಅದರ ಕೆಳಗೆ ಕಪ್ಪು ಶಾಯಿಯ ಸ್ಕೆಚ್/ಮಾರ್ಕರ್ ಪೆನ್ನಿನಿಂದ ಸಹಿ ಮಾಡಿ (ಯಾವುದೇ ಕಾರಣಕ್ಕೂ ಭಾವ ಚಿತ್ರದ ಮೇಲೆ ಸಹಿ ಮಾಡಬಾರದು) ನಂತರ ಭಾವಚಿತ್ರ (Photo) ಮತ್ತು ಸಹಿಯನ್ನು ಒಳಗೊಂಡಂತೆ ಈ ಕೆಳಗಿನ ಅಳತೆ ಪ್ರಕಾರ ಸ್ಕ್ಯಾನ್ ಮಾಡಿ ಇಟ್ಟುಕೊಂಡಿರತಕ್ಕದ್ದು.
ಫೈಲ್ ಅಳತೆ<100 ಕೆಬಿ

ಪಾಸ್ ಪೋರ್ಟ್ ಭಾವಚಿತ್ರದ ಅಳತೆಗಳು:

45 ಎಂ.ಎಂ (ಉದ್ದ) X 35 ಎಂ.ಎಂ. (ಅಗಲ)

ಸಹಿ ಅಳತೆ:
20 ಎಂ.ಎಂ (ಉದ್ದ) X 35 ಎಂ.ಎಂ. (ಅಗಲ) (ಈ ಅಳತೆ ಒಳಗಡೆ)

 

ಡಿಪಿಐ ಹಿನ್ನೆಲೆ=100 ಡಿಪಿಐ
ಇಮೇಜ್ ಅಳತೆ=100%
ಕಲರ್
ಜೆಪಿಇಜಿ(JPEG)

ಹಂತ 3:- ಅರ್ಜಿಯನ್ನು ಭರ್ತಿ ಮಾಡಿದ ನಂತರ ನಮೂದಿಸಿರುವ ವಿವರಗಳನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಬೇಕು. ಅರ್ಜಿಯಲ್ಲಿ ನಮೂದಿಸಿರುವ ವಿವರಗಳಲ್ಲಿ ಏನಾದರೂ ತಪ್ಪುಗಳಾಗಿದ್ದಲ್ಲಿ ಅದನ್ನು ಸರಿಪಡಿಸಲು Edit ಮೇಲೆ ಕ್ಲಿಕ್ ಮಾಡಿ ನಂತರ ಅಗತ್ಯ ತಿದ್ದುಪಡಿಗಳನ್ನು ಮಾಡಬಹುದು.

ಹಂತ 4:- ಅರ್ಜಿಯಲ್ಲಿ ಭರ್ತಿ ಮಾಡಿರುವ ಎಲ್ಲಾ ವಿವರಗಳು ಸರಿಯಾಗಿರುತ್ತವೆಯೆಂದು ಖಚಿತಪಡಿಸಿಕೊಂಡನಂತರ ಸ್ಕ್ಯಾನ್ ಮಾಡಿಟ್ಟುಕೊಂಡಿರುವ ಭಾವಚಿತ್ರ (Photo)ವನ್ನು upload ಮಾಡತಕ್ಕದ್ದು. Photo upload ಮಾಡಿದ ನಂತರ Next Button ಮೇಲೆ ಕ್ಲಿಕ್ ಮಾಡತಕ್ಕದ್ದು,ಅನಂತರವೇ Application Preview ಮೂಡಲಿದ್ದು, ಅದನ್ನು Download ಮಾಡಿಕೊಳ್ಳತಕ್ಕದ್ದು ಮತ್ತು ಅರ್ಜಿಯ ಪ್ರತಿಯನ್ನು ಕಡ್ಡಾಯವಾಗಿ ಅಭ್ಯರ್ಥಿಗಳು ತಮ್ಮೊಂದಿಗೆ ಇಟ್ಟುಕೊಳ್ಳತಕ್ಕದ್ದು. TBCC BANK ಅಪೇಕ್ಷಿಸಿದಾಗ ಈ ಪ್ರತಿಯನ್ನು ಹಾಜರುಪಡಿಸಬೇಕು.

ಹಂತ 5:- ನಂತರ ಅರ್ಜಿ ಶುಲ್ಕವನ್ನು ಪಾವತಿಸುವುದಕ್ಕೆ Post Office Challan ಮೇಲೆ ಕ್ಲಿಕ್ ಮಾಡಿ challan ಪ್ರತಿಯನ್ನು ಡೌನ್‍ಲೋಡ್ ಮಾಡಿಕೊಂಡು ಕರ್ನಾಟಕ ರಾಜ್ಯದಲ್ಲಿನ ಯಾವುದೇ ಇ-ಪಾವತಿ ಅಂಚೆ ಕಚೇರಿಗೆ ಹೋಗಿ , ನಿಗದಿತ ಅರ್ಜಿ ಶುಲ್ಕ + ಸೇವಾ ತೆರಿಗೆ (ರೂ 23/-)ನ್ನು ಪಾವತಿ ಮಾಡಿ. ಅಂತಿಮವಾಗಿ ಪೋಸ್ಟ್ ಆಫೀಸ್ ಸ್ಟಿಕ್ಕರ್ ಅನ್ನು ನಿಮ್ಮ challan ಪ್ರತಿಯ ಮೇಲಿನ ಭಾಗದಲ್ಲಿ ಅಂಟಿಸುವುದರಿಂದ ನಿಮ್ಮ ಶುಲ್ಕ ಪಾವತಿಯನ್ನು ದೃಢಪಡಿಸಲಾಗುತ್ತದೆ .


Note :- ಶುಲ್ಕವನ್ನು ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 08-03-2014ರ ನಂತರ ಶುಲ್ಕವನ್ನು ಸಂದಾಯ ಮಾಡಲು ಅವಕಾಶವಿರುವುದಿಲ್ಲ. ಡಿ.ಡಿ., ಪೋಸ್ಟಲ್ ಆರ್ಡರ್, ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಶುಲ್ಕ ಸಂದಾಯ ಮಾಡದ ಅರ್ಜಿಗಳನ್ನು ಪರಿಗಣಿಸುವುದಿಲ್ಲ .



NOTE :-

FOR ALL THE POSTS EDUCATIONAL QUALIFICATION, EXPERIENCE (IF PRESCRIBED) RESERVATION CERTIFICATES AND ALL OTHER CERTIFICATES / MARKS CARDS SHOULD BE OBTAINED WITHIN THE LAST DATE PRESCRIBED FOR FILLING OF APPLICATIONS.

ಸೂಚನೆ :-

ವಿದ್ಯಾರ್ಹತೆ , ಮೀಸಲಾತಿ ಪ್ರಮಾಣ ಪತ್ರಗಳು , ಇನ್ನಿತರ ಪ್ರಮಾಣ ಪತ್ರಗಳನ್ನು , ಅಂಕಪಟ್ಟಿಗಳನ್ನು ಅರ್ಜಿಹಾಕಲು ನಿಗದಿ ಪಡಿಸಿರುವ ಕೊನೆಯ ದಿನಾಂಕದೊಳಗೆ ಪಡೆದಿರಬೇಕು.

Commencing date for filling the application
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭಿಕ ದಿನಾಂಕ
15th February 2014
Last Date for filling of application
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ
07th March 2014
last date for payment of fee
ಶುಲ್ಕ ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ
08th March 2014